ಶ್ರೀ ಗಣೇಶಮಂದಿರಂ (ರಿ) ತ್ಯಾಗರಾಜನಗರ ಬೆಂಗಳೂರು ೫೬೦ ೦೨೮ ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸವ ದಿನಾಂಕ ೧೨ ನವೆಂಬರ್ ೨೦೧೮ ಸೋಮವಾರದಿಂದ ೧೪ ನವೆಂಬರ್ ೨೦೧೮ ಬುಧವಾರದ ವರೆಗೆ
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನಶಕೆ ಶ್ರೀಮತ್ ವಿಳಂಬಿನಾಮ ಸಂವತ್ಸರದ ದಕ್ಷಿಣಾಯನ ಕಾರ್ತೀಕಮಾಸ ಶುಕ್ಲಪಕ್ಷ ಸಪ್ತಮೀ ಬುಧವಾರ ಬೆಳಗ್ಗೆ ೭.೪೫ ರಿಂದ ೮.೪೦ ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೆರವೇರಿಸುವ ಮಹಾಕುಂಭಾಭಿಷೇಕದ ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಅನುಷ್ಠಾನಗಳು.