Forthcoming celebrations in the temple:
ಶ್ರೀ ಗಣೇಶಮಂದಿರಂ (ರಿ)
ತ್ಯಾಗರಾಜನಗರ ಬೆಂಗಳೂರು ೫೬೦ ೦೨೮
ದೇವಸ್ಥಾನದ ನವೀಕರಿಸಿದ ರಾಜಗೋಪುರ ಹಾಗೂ ವಿಮಾನಗೋಪುರಗಳ ಕುಂಭಾಭಿಷೇಕ ಮಹೋತ್ಸವ
ದಿನಾಂಕ ೧೨ ನವೆಂಬರ್ ೨೦೧೮ ಸೋಮವಾರದಿಂದ ೧೪ ನವೆಂಬರ್ ೨೦೧೮ ಬುಧವಾರದ ವರೆಗೆ
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನಶಕೆ ಶ್ರೀಮತ್ ವಿಳಂಬಿನಾಮ ಸಂವತ್ಸರದ ದಕ್ಷಿಣಾಯನ ಕಾರ್ತೀಕಮಾಸ ಶುಕ್ಲಪಕ್ಷ
ಸಪ್ತಮೀ ಬುಧವಾರ ಬೆಳಗ್ಗೆ ೭.೪೫ ರಿಂದ ೮.೪೦ ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನೆರವೇರಿಸುವ ಮಹಾಕುಂಭಾಭಿಷೇಕದ
ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಅನುಷ್ಠಾನಗಳು.
ಈ ಕಾರ್ಯಕ್ರಮಗಳಿಗೆ ಸರ್ವರಿಗೂ ಆದರದ ಸ್ವಾಗತ
ಗುರು, ಗಣಪತಿ ಪ್ರಾರ್ಥನೆ, ಗೋ ಪೂಜೆ, ಗಂಗಾಪೂಜೆ, ಕೃಚ್ಚ್ರಾಚರಣೆ , ಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ,
ಮಹಾಸಂಕಲ್ಪ, ದ್ವಜಾರೋಹಣ, ಋತ್ವಿಗ್ವರಣ, ಕೌತುಕಬಂಧನ, ಅಂಕುರಾರ್ಪಣ, ಬ್ರಹ್ಮ ಕೂರ್ಚಹವನ, ಕೂಶ್ಮಾಂಡ ಹವನ ,
ಪ್ರಾಯಶ್ಚಿತ್ತ ಗಣಹವನ. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ
ರಾಕ್ಷೋಘ್ನ ಪಾರಾಯಣ, ಉದಕಶಾಂತಿ ಪಾರಾಯಣ, ರಾಕ್ಷೋಘ್ನಹವನ, ವಾಸ್ತುಹವನ, ದಿಗ್ಬಲಿ, ಮಂಡಳ ದರ್ಶನ
ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ
ವೇದಘೋಷ, ಗಣಪತಿ ಪೂಜೆ , ಪುಣ್ಯಾಹವಾಚನ, ಸ್ನಪನಕಳಶ ಸ್ಥಾಪನೆ ಗಣಪತಿಹವನ, ನವಗ್ರಹಹವನ,ಪರಿವಾರದೇವತಾಸಮೇತ ಶ್ರೀ
ವರಸಿದ್ಧಿವಿನಾಯಕಸ್ವಾಮಿಯ ಮಹಾಕುಂಭಾಭಿಷೇಕಾಂಗ ಕಳಶ ಅಧಿವಾಸ ಹವನಗಳು, ಪೀಠಾಧಿವಾಸ ಹವನಗಳು, ಅಷ್ಟಬಂಧ
ಹವನಗಳು. ೧೨ ಘಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ.
ವೇದಘೋಷ, ಗಣಪತಿ ಪೂಜೆ , ಪುಣ್ಯಾಹವಾಚನ, ಗಣಪತಿ ಸಹಸ್ರ ಮೋದಕ ಹೋಮ, ಚತುರ್ನವತಿ ಕಲಾಹವನ, ತತ್ವ ಹವನಗಳು ,
ಶಾಂತಿ ಹವನ, ಪ್ರಾಯಶ್ಚಿತ್ತ ಹವನ, ೭.೩೦ ಕ್ಕೆ ಪೂರ್ಣಾಹುತಿ.
ಬೆಳಗ್ಗೆ ೭.೪೫ ರಿಂದ ೮.೪೦ ರ ವರೆಗೆ ಸಲ್ಲುವ ವೃಶ್ಚಿಕ ಲಗ್ನದ ಶುಭ ಇಷ್ಟಾಂಶದಲ್ಲಿ
ಶ್ರೀ ಶ್ರೀ ಶ್ರೀ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ೧೦೦೮ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಹಾಗೂ
ಕಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಿಂದ ಮಹಾಕುಂಭಾಭಿಷೇಕ,
ಶ್ರೀ ಶ್ರೀ ಗಳವರ ಆಶೀರ್ವಚನ, ಋತ್ವಿಕ್ ಸಂಭಾವನೆ, ವಿಪ್ರಾಶೀರ್ವಾದ,ಮಹಾಮಂಗಳಾರತಿ, ಧ್ವಜ ಅವರೋಹಣ,ತೀರ್ಥ ಪ್ರಸಾದ
ವಿನಿಯೋಗ.
ನಾಗರ ಪಂಚಮಿ
ಸ್ವಾತಂತ್ರ ಉತ್ಸವದ ಪ್ರಯುಕ್ತ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಗೆ ವಿಶೇಷ ಅಲಂಕಾರ. ಅಲಂಕಾರ ಸೇವೆ ಮಾಡಿಸಲು ಇಚ್ಚಿಸುವವರು ಮುಂಚಿತವಾಗಿ ಅರ್ಚಕರಲ್ಲಿ ಸಂಪರ್ಕಿಸಿ. ಸೇವಾ ಶುಕ್ಲವನ್ನು ನೀಡಿ. ಪೂರ್ತ ಶುಕ್ಲಕ್ಕೆ ರಶೀತಿಯನ್ನು ಪಡೆಯತಕ್ಕದ್ದು.
ವರಮಹಾ ಲಕ್ಷ್ಮೀ ವ್ರತ
ಋಗ್ ಉಪಾಕರ್ಮ
ಕ್ರೋಧಿ ಸಂವತ್ಸರ ಶ್ರಾವಣ ಮಾಸ ಶ್ರೀ ಸತ್ಯನಾರಾಯಣ ಪೂಜೆ
ಯಜೂರ್ ಉಪಾಕರ್ಮ
ಶ್ರೀ ಕೃಷ್ಣ ಜನ್ಮಾಷ್ಟಮಿ
ತೋಳಪ್ಪರ್ ಶ್ರೀ ಕೃಷ್ಣ ಜಯಂತಿ
ಸ್ವರ್ಣ ಗೌರಿ ವ್ರತ; ಸುಮಂಗಲಿಯಾರಿಗಾಗಿ ಸಾಮೋಹಿಕೆ ಸ್ವರ್ಣ ಗೌರಿ ವ್ರತ ಮಂದಿರದ ಆವರ್ಣದಲ್ಲಿ ಏರ್ಪಡಿಸಲಾಗಿದೆ. ಭಕ್ತಾಧಿಗಳು ಪೂರ್ವವಾಗಿ ತಮ್ಮ ಹೆಸರನ್ನು ಬರೆಸಿ ರೂ. 25/- ಗಳನ್ನು ನೀಡಿ ರಶೀತಿ ಪಡೆದು ಈ ಕಾರ್ಯಗ್ರಾಮದಲ್ಲಿ ಭಾಗವಹಿಸಬಹುದು.
ಶ್ರೀ ವರಸಿದ್ಧಿ ವಿನಾಯಕ ವ್ರತ
ಬೆಳಿಗ್ಗೆ 10:00ಗಂಟೆಗೆ ಉತ್ಸವಮೂರ್ತಿ ಹಾಗೂ ಮೃಣ್ಮಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ.
ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ
ಸಂಜೆ 8:00 ರಿಂದ ಡಾ|| ಶ್ರೀ ಸತ್ಯನಾರಾಯಣ ಭಟ್ ರವರಿಂದ ಶ್ಯಮಂತಕೋಪಾಖ್ಯಾನ ಪ್ರವಚನ
ಬೆಳಗ್ಗೆ 10:00ರಿಂದ ಏಕಾದಶೀ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ
3 Mon |
---|
All-day
|
12:00 AM
1:00 AM
2:00 AM
3:00 AM
4:00 AM
5:00 AM
6:00 AM
7:00 AM
8:00 AM
9:00 AM
10:00 AM
11:00 AM
12:00 PM
1:00 PM
2:00 PM
3:00 PM
4:00 PM
5:00 PM
6:00 PM
7:00 PM
8:00 PM
9:00 PM
10:00 PM
11:00 PM
|