ಶ್ರೀ ಗಣೇಶ ಮಂದಿರಂ (ರಿ)

೨ನೇ ಬ್ಲಾಕ್  ತ್ಯಾಗರಾಜನಗರ, ಬೆಂಗಳೂರು – ೫೬೦೦೨೮

ಸ್ಥಾಪನೆ: ೧೯೫೫

ಶ್ರೀ ಗಣೇಶ ಮಂದಿರವು, ಸಂ. ೧೯೫೫ ರಲ್ಲಿ ಭಗವತ್ಪ್ರೇರಣೆಯಿಂದ ಸ್ಥಾಪಿಸಲಾಗಿದ್ದು ಮಂದಿರದಲ್ಲಿ ಪ್ರಮುಖವಾಗಿ ಶ್ರೀ ವರಸಿದ್ಧಿವಿನಾಯಕ ಸ್ವಾಮಿಯ ಸನ್ನಿದ್ಧಿಯೊಡನೆ ಶ್ರೀ ಶಿವಪಂಚಾಯತನ, ಶ್ರೀ ವಲ್ಲೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ಸತ್ಯನಾರಾಯಣ ಸ್ವಾಮಿ, ಶ್ರೀ ಲಕ್ಷ್ಮಣ ಹನುಮಾನ್ ಸಹಿತ ಸೀತಾರಾಮಚಂದ್ರ ಮೂರ್ತಿ, ವೀರಾಂಜನೇಯ ಸ್ವಾಮಿ, ಶ್ರೀ ವೇಣುಗೋಪಾಲ ಕೃಷ್ಣ, ಶ್ರೀ ಶಾರದಾಂಬಾ ದೇವಿ, ಶ್ರೀ ಕಾಳಿಕಾಂಬಾ ದೇವಿ, ಶ್ರೀ ಶಂಕರಾಚಾರ್ಯರು, ಹಾಗೂ ನವಗ್ರಹಗಳ ಸನ್ನಿಧಿ ಇವೆ.
ಪ್ರಾಕಾರದಲ್ಲಿ, ಗರುಡಗಂಬ, ಮೂಷಕ, ಭಕ್ತಹನುಮ, ಶ್ರೀ ಕ್ಷಿಪ್ರವರಪ್ರಸಾದ ಗಣಪತಿ, ಜಗದ್ಗುರು ಶ್ರೀ ಚಂದ್ರಶೇಖರಭಾರತೀ, ವಿದ್ಯಾಗಣಪತಿ, ಶ್ರೀ ದಕ್ಷಿಣಾಮೂರ್ತಿ, ಶ್ರೀ ಲಂಬೋದರಗಣಪತಿ, ಶ್ರೀ ಚಂಡಿಕೇಶ್ವರ ಸ್ವಾಮಿ, ಶ್ರೀ ನಂದಿಕೇಶ್ವರರ ಪ್ರತಿಮೆಗಳಿವೆ.  ಇವಲ್ಲದೆ, ಮಹಾಗಣಪತಿಗೆ ಪ್ರಿಯವಾದ ಶ್ವೇತಾರ್ಕ ವೃಕ್ಷ, ಔದುಂಬರ (ಅತ್ತಿ), ಪಲಾಶ (ಮುತ್ತಗ), ತುಳಸೀ, ಅಶ್ವತ್ಥ (ಅರಳಿ) ವೃಕ್ಷಗಳು, ಅಲ್ಲಲ್ಲಿ ಕಲ್ಪವೃಕ್ಷಗಳು ಇವೆ.
ಅರಳಿ ಮರದಡಿ ಭಕ್ತರಿಂದ ಸ್ಥಾಪಿಸಲ್ಪಟ್ಟ ನಾನಾ ನಾಗಪ್ರತಿಮೆಗಳೂ ಇವೆ.
ಮಂದಿರದ ರಾಜಗೋಪುರವು ಸರ್ವಧರ್ಮ ಸಮನ್ವತೆ ಸಾರುತ್ತಿರುವುದು ಖ್ಯಾತಿ. ಇದರಲ್ಲಿ ಶೈವ, ವೈಶ್ಣವ, ಬೌದ್ಧ, ಜೈನಾದಿ ಭಾರತೀಯ ಧರ್ಮದೊಂದಿಗೆ, ವಿಶ್ವದ ಇತರ ಧರ್ಮಗಳಾದ ಇಸ್ಲಾಂ ಹಾಗೂ ಕ್ರೈಸ್ತ ಧರ್ಮದ ಗುರುಗಳ ಪ್ರತಿಮೆಗಳೂ ಇವೆ.
ಶ್ರೀವರಸಿದ್ಧಿವಿನಾಯಕನ ವಿಮಾನಗೋಪುರದಲ್ಲಿ ಮಹಾಗಣಪತಿಯ ಮುದ್ಗಲಪುರಾಣಾನುಸಾರದ ೩೨ ರೂಪಗಳ ಪ್ರತಿಮೆಗಳೂ ಇವೆ.
https://www.facebook.com/SriGaneshaMandiram/

Follow us on YouTube https://www.youtube.com/channel/UCnaH_OR0LO3Xb8czRqaAhDw?view_as=subscriber