Forthcoming celebrations in the temple:
Aug
25
Fri
2017
65ನೇ ಶ್ರೀ ಗಣೇಶೋತ್ಸವ
ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ ಶ್ರೀ ಹೇಮಲಂಬೀ (ಹೇವಿಳಂಬೀ) ನಾಮ ಸಂವತ್ಸರದ ಭಾದ್ರಪದ ಶುದ್ಧ ಚತುರ್ಥಿ ಶುಕ್ರವಾರ ತಾ|| 25-08-2017 ರಿಂದ ಚತುರ್ದಶಿ ಮಂಗಳವಾರ ತಾ|| 05-09-2017 ಪೂರ್ತಾ ಶ್ರೀ ಗಣೇಶೋತ್ಸವವು ಭಗವತ್ಪ್ರೇರಣಾನುಸಾರ ಮಂದಿರದಲ್ಲಿ ನಡೆಸಲು ಸಮಿತಿಯವರು ನಿರ್ಧರಿಸಿರುತ್ತಾರೆ.
ಭಕ್ತ ಮಹನೀಯರು ಎಂದಿನಂತೆ ಬಂದು ಉತ್ಸವ ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ತನು-ಮನ-ಧನ ಸಹಕಾರ ನೀಡಿ ಶ್ರೀ ಮಹಾಗಣಪತಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
ತಾ|| 01-08-2017
ಶ್ರೀ ಗಣೇಶ ಮಂದಿರಂ
ಕಾರ್ಯಕಾರಿ ಸಮಿತಿ
ಪ್ರತಿದಿನ ಪ್ರಾತಃಕಾಲ ಮೂಲದೇವರಿಗೆ ಅಭಿಷೇಕ-ಅರ್ಚನೆಗಳು, ಸಂಜೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
ಸೇವೆ ಮಾಡಿಸುವವರು ಮುಂಚಿತವಾಗಿ ಅರ್ಚಕರನ್ನು ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.
Aug
29
Tue
2017
ವಸಂತಪುರ ದಿ|| ವೇ. ಬ್ರ. ಶ್ರೀ. ಶಿವಸ್ವಾಮಿ ಕುಟುಂಬದವರಿಂದ “ವೇದನಾದ ವೈಭವ” ಕಾರ್ಯಕ್ರಮ ವೇ. ಬ್ರ. ಶ್ರೀ ಫಾಲಚಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ.
Aug
30
Wed
2017
ವಿದ್ವಾನ್ ಅನಂತಭಾಗವತ್ ಮತ್ತು ವೃಂದದವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ – ದೇವರನಾಮ ಮತ್ತು ಭಕ್ತಿಗೀತೆಗಳು.
Aug
31
Thu
2017
ವಿದ್ವಾನ್ ಚಿ|| ರಾಕೇಶ್ ದತ್ ಮತ್ತು ಸಂಗಡಿಗರಿಂದ ವೇಣು(ಕೊಳಲು) ವಾದನ ಕಾರ್ಯಕ್ರಮ
Sep
2
Sat
2017
ಶ್ರೀ ಬಿ. ಎಂ. ಅರ್ಜುನ್ ಶ್ರೀವತ್ಸ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ
Sep
3
Sun
2017
ಶ್ರೀ ಮಹಾಗಣಪತಿ ಸಹಸ್ರಮೋದಕ ಹೋಮ – ಪೂರ್ಣಾಹುತಿ -ಪ್ರಸಾದ ವಿನಿಯೋಗ
ನಾಟ್ಯ ಪ್ರವೀಣೆ ಕು|| ಭಾನುಮತಿ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಮತ್ತು ದೇವಾಲಯ ನೃತ್ಯ
Sep
4
Mon
2017
ವಿದ್ವಾನ್ ಅರ್. ನಾಗರಾಜ್ ಮತ್ತು ವೃಂದದವರಿಂದ ವೀಣಾವಾದನ ಕಾರ್ಯಕ್ರಮ
Sep
5
Tue
2017
ಉತ್ಸವ ಮೂರ್ತಿಗೆ ಷೋಡಷೋಪಚಾರಪೂಜೆ – ಉದ್ವಾಸನೆ
ರಥೋತ್ಸವ: ವಿದ್ವಾನ್ ಪರಮೇಶ್ / ರಾಜೇಶ್ ಮತ್ತು ಸಂಗಡಿಗರಿಂದ ನಾದಸ್ವರ, ಮೃಣ್ಮಯಮೂರ್ತಿ ವಿಸರ್ಜನೆ, ಪ್ರಸಾದ ವಿನಿಯೋಗ, ಮಂಗಳ
Aug
17
Sat
2024
ಶನಿ ಪ್ರದೋಷ:
ಶ್ರೀ ಶಿವ ಪಂಚಾಯತನ ಸನ್ನಿದ್ಧಿಯಲ್ಲಿ ಪ್ರದೋಷ ಪೂಜೆ – ಪೂಜೆಗೆ ಭಕ್ತಾಧಿಗಳು ಮುಂಚಿತವಾಗಿ ತಮ್ಮ ಹೆಸರನ್ನು ಬರೆಸಿ ರಶೀತಿಯನ್ನು ಪಡೆಯತಕ್ಕದ್ದು. ಶುಲ್ಕ ರೂ. 100/-
ತ್ರಯೋದಶಿ ತಿಥಿ ಆರಂಭ – ಆಗಸ್ಟ್ 17, 2024 – 08:05 AM
ತ್ರಯೋದಶಿ ತಿಥಿ ಮುಕ್ತಾಯ – ಆಗಸ್ಟ್ 18, 2024 – 05:51 AM
ಪೂಜಾ ಸಮಯ – 06:14 PM ರಿಂದ 08:28 PM
Oct
3
Thu
2024
ನವರಾತ್ರಿ ಹಾಗೂ ದಸರಾ ಉತ್ಸವ
ಶ್ರೀ ಗುರುಸ್ಮೃತಿ ಕಲಾ ಕೇಂದ್ರದ – ದಿ|| ಶ್ರೀಮತಿ ಚಂದ್ರಮತಿ ರವರ ಶಿಷ್ಯವೃಂದದವರಿಂದ “ಸೌಂದರ್ಯ ಲಹರಿ ಹಾಗೂ ಸ್ತೋತ್ರಗಳು”
ಶ್ರೀ ಗುರುಸ್ಮೃತಿ ಕಲಾ ಕೇಂದ್ರದ ವಿದುಷಿ ಶ್ರೀಮತಿ ಸಾವಿತ್ರಿ ಎಸ್ ರವರ ಶಿಷ್ಯವೃಂದದವರಿಂದ ಪಿಟೀಲು ವಾದನ
Oct
4
Fri
2024
ವಿದುಷಿ ಶ್ರೀಮತಿ ನಂದಿನಿ ವಿಜಯ ವಿಠ್ಠಲ ರವರ ನೇತೃತ್ವದಲ್ಲಿ ಶ್ರೀ ವಿಜಯ ವಿಠ್ಠಲ ಕಲಾ ಶಾಲೆ, ಹನುಮಂತ ನಗರ ಇವರಿಂದ
ಭಕ್ತಿ ಗೀತೆಗಳು – ಸಂಗೀತ ಕಾರ್ಯಕ್ರಮ
Subscribe to filtered calendar
Subscribe to filtered calendar