ನಾನಾರತ್ನ ವಿಚಿತ್ರಕಂ ರಮಣಕಂ ಸಿಂಹಾಸನಂ ಕಲ್ಪಿತಂ।
ಸ್ನಾನಂ ಜಾಹ್ನವಿವಾರಿಣಾ ಗಣಪತೇ ಪೀತಾಂಬರಂ ಗೃಹ್ಯತಾಂ।।
ಕಂಠಂ ಮೌಕ್ತಿಕ ಮಾಲಿಕಾ ಶ್ರುತಿಯುಗೇ ದ್ವೇಧಾರಿತೆ ಕುಂಡಲೇ।
ನಾನಾರತ್ನ ವಿರಾಜಿತೊ ರವಿ ವಿಭಾಯುಕ್ತಃ ಕಿರೀಟಃ ಶಿರೇ।।೧।।

ಭಾಲೇ ಚರ್ಚಿತ ಕೇಶರಂ ಮೃಗಮದಾಮೋದಾಂಕಿತಂ ಚಂದನಂ।
ಕಸ್ತೂರೀ ತಿಲಕೋದ್ಭವಂ ಸುಕುಸುಮಂ ಮಂದಾರ ದೂರ್ವಾಶಮಿ।।
ಗುಗ್ಗೂಲೋದ್ಭವ ಧೂಪಕಂ ವಿರಚಿತಂ ದೀಪಂ ಸವರ್ತ್ಯಾಯುತಂ।
ಭಕ್ಷ್ಯಂ ಮೋದಕ ಸಂಯುತಂ ಗಣಪತೇ ಕ್ಷೀರೋದನಂ ಗೃಹ್ಯತಾಮ್।।೨।।

ತಾಂಬೂಲಂ ಮನಸಾಮಯಾ ವಿರಚಿತಂ, ಜಂಬೂಫಲಂ ದಕ್ಷಿಣಾ।
ಸಾಷ್ಟಾಂಗ ಪ್ರಣತಿಂ ಸ್ತುತಿಂ ಬಹುವಿಧಾಂ ಪೂಜಾ ಗೃಹಾಣ ಪ್ರಭೋ।।
ಮೇ ಕಾಮಃ ಸತತಂ ತವಾರ್ಚನವಿಧೌ ಬುದ್ಧಿಸ್ತವಾಲಿಂಗನೇ।
ಸ್ವೇಚ್ಛಾತೇ ಸುಖದರ್ಶನೆ ಗಣಪತೇ ಭಕ್ತಿಸ್ತು ಪಾದಾಂಬುಜೇ।।೩।।

ಮಾತಾ ಗಣೇಶಶ್ಚ ಪಿತಾ ಗಣೇಶೋ।
ಭ್ರಾತಾ ಗಣೇಶಶ್ಚ ಸಖಾ ಗಣೇಶಃ।।
ವಿದ್ಯಾಗಣೇಶೋ ದ್ರವಿಣಂ ಗಣೇಶಃ।ಸ್ವಾಮೀ ಗಣೇಶಃ ಶರಣಂ ಗಣೇಶಃ।।೪।।

ಇತೋ ಗಣೇಶಃ ಪರತೋ ಗಣೇಶಃ।
ಯತೋ ಯತೋ ಯಾಮಿ ತತೋ ಗಣೇಶಃ।।
ಗಣೇಶದೇವಾದಪರಂ ನ ಕಿಂಚಿತ್।
ತಸ್ಮಾತ್ ಗಣೇಶಂ ಶರಣಂ ಪ್ರಪದ್ಯೇ।।೫।।

ಇತಿ ಶ್ರೀಗಣೇಶ ಮಾನಸಪೂಜಾ ಸಂಪೂರ್ಣಂ।।

ಅರ್ಥ:
ಎಲೈ ಗಣಪತೇ, ಹಲವು ಬಗೆಯ ರತ್ನಗಳಿಂದ ವಿಚಿತ್ರವೂ ರಮಣೀಯವೂ ಆದ ಸಿಂಹಾಸನ ಗಂಗಾಜಲದಿಂದ ಸ್ನಾನ ಮತ್ತು ಪೀತಾಂಬರಗಳನ್ನು ನೀನು ಸ್ವೀಕರಿಸು.
ಕೊರಳಲ್ಲಿ ಮುತ್ತಿನ ಮಾಲೆಯೂ ಕಿವಿಗಳಲ್ಲಿ ಸೂರ್ಯಕಾಂತಿಯಿಂದ ಮಿನುಗುವ ಕುಂಡಲಗಳೂ ತಮ್ಮ ತಲೆಯ ಮೇಲೆ ಹಲವಾರು ತರದ ರತ್ನಗಳಿಂದ ಶೋಭಿಸುವ ಮುಕುಟವೂ ಇವೆ.(೧)

ಕಸ್ತೂರಿಯಿಂದ ಸಂತೋಷವನ್ನು ಮಾಡುವ ಚಂದನವೂ ಮತ್ತು ಕೇಶರಲೇಪನವುಳ್ಳ ಹಣೆಯುಳ್ಳವನೂ ಒಳ್ಳೆ ಹೂವು,ಎಕ್ಕೆ ಹೂವು, ಗರಿಕೆ ಗಳಿಂದ ತಲೆಯನ್ನು. ಶೋಭಿತಗೊಳಿಸಿದವನೂ ಆದ ಗಣೇಶನೆ,ಗುಗ್ಗುಳದ ಧೂಪ ಮತ್ತು ಸುಂದರವಾದ ಬತ್ತಿಯುಳ್ಳ ದೀಪ, ಉಂಡೆಯ ಊಟ, ಮತ್ತು ಹಾಲು ಅನ್ನ ಇವನ್ನು ನೀನು ಸ್ವೀಕರಿಸು.(೨)

ನಾನು ಮನಸ್ಸಿನಿಂದ ತಯಾರಿಸಿದ ತಾಂಬೂಲ, ನೆರಳೆಹಣ್ಣು ದಕ್ಷಿಣೆ, ಸಾಷ್ಟಾಂಗ ನಮಸ್ಕಾರ, ಬಹುವಿಧ ಪೂಜೆ, ಸ್ತುತಿ ಇವೆಲ್ಲವನ್ನು ಪ್ರಭುವೆ ನೀನು ಸ್ವೀಕರಿಸು. ನನ್ನ ಬಯಕೆಯು ಯಾವಾಗಲೂ ನಿನ್ನ ಪೂಜೆಯಲ್ಲಿ, ಬುದ್ಧಿಯು ನಿನ್ನ ಧ್ಯಾನದಲ್ಲಿ, ನನ್ನ ಇಚ್ಛೆಯು ನಿನ್ನ ಮುಖದರ್ಶನದಲ್ಲಿ ಮತ್ತು ಭಕ್ತಿಯು ನಿಮ್ಮ ಚರಣಗಳಲ್ಲಿ ಎಲೈ ಗಣಪತಿಯೇ ನೆಲೆಗೊಳ್ಳಲಿ.(೩)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.